ತಾಯ್ನಾಡಿನಿಂದ ಸಾವಿರಾರು ಮೈಲಿ ದೂರ ಬಂದು ನ್ಯೂ ಜೆರ್ಸಿಯಲ್ಲಿ ನೆಲೆಸಿರುವಂತಹ ಎಲ್ಲಾ ಕನ್ನಡ ಬಂಧುಗಳನ್ನು ಕನ್ನಡ ಭಾಷೆಯ ಬಾಂಧವ್ಯದಲ್ಲಿ ಬೆಸೆಯುವ ನಿಟ್ಟಿನಲ್ಲಿ 2004ರಲ್ಲಿ ಪ್ರಾರಂಭವಾಗಿ ಸತತವಾಗಿ ಕಾರ್ಯನಿರ್ವಹಿಸುತ್ತಿರುವ ಲಾಭರಹಿತ ಸಾಂಸ್ಕೃತಿಕ ದತ್ತಿ ಸಂಸ್ಥೆ – “ಸುಮಧುರ ಸ್ನೇಹ ಸಮ್ಮಿಲನ ನಮ್ಮೀ ಬೃಂದಾವನ” ಕನ್ನಡ ಕೂಟ.

ಉತ್ಸಾಹಿ ಸ್ವಯಂಸೇವಕರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕೂಟವು, ನಮ್ಮ ಪರಂಪರೆ, ಆಚಾರ-ವಿಚಾರಗಳನ್ನು, ಸoಸ್ಕೃತಿಯನ್ನು ಉಳಿಸಿ-ಬೆಳೆಸುವ ಸಕಾರಾತ್ಮಕ ಪ್ರಯತ್ನಗಳನ್ನು ಅನುದಿನವೂ ನಡೆಸುತ್ತಿದೆ. ಸ್ಥಳೀಯ ಮತ್ತು ಕರುನಾಡಿನ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಪ್ರೋತ್ಸಾಹಿಸುವುದರ ಜೊತೆಗೆ ಕನ್ನಡ ಸಾಹಿತ್ಯ, ಕನ್ನಡ ಶಾಲೆ, ಆರೋಗ್ಯ, ಚಾರಿಟಿ, ಯುವ ಮುಂತಾದ ಹಲವಾರು ವಿವಿಧ ಚಟುವಟಿಕಗಳು ವರ್ಷ ಪೂರ್ತಿ ನಡೆಯಲ್ಪಡುತ್ತವೆ.

ನೀವು ಈಗಾಗಲೇ ನಮ್ಮ ಸಂಸ್ಥೆಯ ಸದಸ್ಯರಾಗಿ ನೋಂದಾಯಿತರಾಗಿರದಿದ್ದಲ್ಲಿ ದಯವಿಟ್ಟು ಸದಸ್ಯರಾಗುವಂತೆ ಈ ಮೂಲಕ ಕೋರುತ್ತೇವೆ. ವಾರ್ಷಿಕ/ದ್ವೈವಾರ್ಷಿಕ-ಆಜೀವ ಮತ್ತು ವಿದ್ಯಾರ್ಥಿ ಸದಸ್ಯತ್ವಗಳು ಲಭ್ಯ.

Tradition

Culture

Festivals

Community

Music

Brindavana Kannada Koota has been approved as an official Certifying Organization for the Prestigious President’s Volunteer Service Award